Thursday, April 19, 2007

ವಾಪಸ್ಸು ಬಂದೆ!

ಸ್ವಲ್ಪ ದಿನಗಳ ಹಿಂದೆ ಕನ್ನಡ "Movies", ಕನ್ನಡ ಹಾಡುಗಳು ಅಂದ್ರೆ ಸಾಕು! Boys ಎಲ್ಲಾ ನೂರು ಮೈಲಿ ದೂರ ಓಡಿ ಹೋಗ್ತಾಇದ್ರು! ಈಗೀಗ ಸ್ವಲ್ಪ ಕೇಳೊ ಹಾಗೆ ಹಾಡುಗಳು ಬರ್ತಾಇದೆ! ಹೇಳ್ಬೆಕಂದ್ರೆ, ನಾನು ಕೂಡ ಸ್ವಲ್ಪ "ಹೆದರ್ತಾ"ಇದ್ದೆ!
ಆದ್ರೆ, ಈಗ ಪರ್ವಾಗಿಲ್ಲ!
ಮುಂಗಾರು ಮಳೆ, ಆರಸು, ನೆನಪಿರಲಿ ಹಾಡುಗಳನ್ನ ಕೇಳಿ ಸಂತೊಷವಾಯ್ತು! ಹೀಗೆ ಮುಂದೆ ಹೋದ್ರೆ, ಹಳೆ ಹಾಡುಗಳ ಹಾಗೆ ಇಲ್ಲದೆ ಹೋದ್ರು, "ಆಯ್ಯಪ್ಪ, ಛೀ, ಥೊ, ಕಛಡ!" ಅನ್ನೊ ಸ್ತಿಥಿ ಇರೊಲ್ಲಾ ಅಂತ ನನ್ನ ಅನಿಸಿಕೆ
ಇಷ್ಟು "Type" ಮಾಡೊ ಅಷ್ಟ್ರಲ್ಲಿ ನನ್ನ ಕೈ ಬಿದ್ಹೋಯ್ತು!
ಇಷ್ಟೆಲ್ಲಾ ಆದ್ಮೇಲೆ, ನನ್ನ Top 5, ಕನ್ನಡ ಹಾಡುಗಳನ್ನ List ಮಾಡ್ದೆ ಇರೋಕ್ಕೆ ಆಗುತ್ತಾ? Here Goes -
೧. ಜೋತೆ ಜೋತೆಯಲಿ - ಗೀತ, ಇಳಯರಾಜ
೨. ನಾದಮಯ, ಈ ಲೋಕವೆಲ್ಲಾ... - ಆಕಸ್ಮಿಕ, ಉಪೇಂದ್ರ ಕುಮಾರ್
೩. ಕೋಗಿಲೆ ಹಾಡಿದೆ ಕೇಳಿದೆಯಾ... - ಗೊತ್ತಿಲ್ಲಾ, ಗೊತ್ತಿಲ್ಲಾ, ಅಣ್ಣಾವ್ರ ಹಾಡು.
೪. ದೇವರ ಆಟ... ಅವಳ ಹೆಜ್ಜೆ, ರಾಜನ್ ನಾಗೇಂದ್ರ
೫. ಆಡಿಸಿ ನೋಡು, ಬೀಳಿಸಿ ನೋಡು... ಕಸ್ತೂರಿ ನಿವಾಸ, ಜಿ ಕೆ ವೆಂಕಟೇಶ್ + ನೂರೊಂದು ನೆನಪು - ಬಂಧನ, ರಂಗ ರಾವ್

ಈ ಹಾಡುಗಳನ್ನು www.kannadaaudio.com ನಲ್ಲಿ ಕೇಳಿ.
ಇವತ್ತಿಗೆ, ಟಾಟಾ!

1 comment:

Anonymous said...

ashwin,

sonu nigam haaDiruva mungaru male ..ee ninna paTTiyalli seeraleebeku.

try transliteration..Eslatu.com